ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತಿದ್ದು ಅಭಿಮಾನಿಗಳಿಗೆ ತೀರಾ ಆಘಾತ ಮೂಡಿಸಿತ್ತು. ಹಾಗಿರಬೇಕಾದರೆ ನಾಯಕ ವಿರಾಟ್ ಕೊಹ್ಲಿ ಸ್ಥಿತಿ ಹೇಗಿದ್ದಿತ್ತು? ಈ ಬಗ್ಗೆ ಸ್ವತಃ ಕೊಹ್ಲಿ ಮಾತನಾಡಿದ್ದಾರೆ.ವಿಶ್ವಕಪ್ ಸೋಲಿನಿಂದ ಹೊರಬಂದು ವಿಂಡೀಸ್ ಸರಣಿಗೆ ಸಿದ್ಧರಾಗುತ್ತಿರುವ ಕೊಹ್ಲಿ ಆ ಸೋಲಿನ ಬಗ್ಗೆ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.ಪ್ರತೀ ಬಾರಿಯೂ ನಾನು ಸೋಲು, ಹಿನ್ನಡೆಯಿಂದಲೇ ಉತ್ತಮ ಮನುಷ್ಯನಾಗಿ ರೂಪುಗೊಂಡಿದ್ದೆ. ಎಲ್ಲವೂ ಚೆನ್ನಾಗಿ ಸಾಗುತ್ತಿರುವಾಗ, ಎಲ್ಲರೂ ಚೆನ್ನಾಗಿ ಆಡುತ್ತಿರುವಾಗ ಇದ್ದಕ್ಕಿದ್ದ