ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಗೆ ಹೆಸರುವಾಸಿ. ಅದು ಆಟದಲ್ಲಿರಬಹುದು, ಮಾತಿನಲ್ಲಿರಬಹುದು.. ಕೆಣಕಿದವರನ್ನು ಸುಮ್ಮನೆ ಬಿಡುವವರಲ್ಲ ಕೊಹ್ಲಿ. ಹೀಗೇ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಮಾಡಲು ಹೋಗಿ ಕೊಹ್ಲಿ ಮ್ಯಾಚ್ ರೆಫರಿ ಬಳಿ ಸಿಕ್ಕಿಹಾಕಿಕೊಂಡ ಘಟನೆಯೊಂದನ್ನು ಅವರು ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.2012 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಪ್ರೇಕ್ಷಕರ ಮೂದಲಿಕೆಯಿಂದ ಬೇಸತ್ತ ಕೊಹ್ಲಿ ಅವರ ಕಡೆಗೆ ತಮ್ಮ ಮಧ್ಯ ಬೆರಳು ತೋರಿ ವಾರ್ನ್ ಮಾಡಿದ್ದರಂತೆ.