ಬೆಂಗಳೂರು: 2008 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದ ವಿರಾಟ್ ಕೊಹ್ಲಿ ಇದುವರೆಗೆ ಅದೇ ಐಪಿಎಲ್ ಫ್ರಾಂಚೈಸಿ ಜೊತೆಗೆ ತಮ್ಮ ನಂಟು ಉಳಿಸಿಕೊಂಡಿದ್ದಾರೆ.ಆರ್ ಸಿಬಿ ಎಂದರೆ ಕೊಹ್ಲಿಗೆ ಎರಡನೇ ತವರು ಮನೆಯಿದ್ದಂತಾಗಿದೆ. ಹಾಗಿದ್ದರೂ ಕೊಹ್ಲಿ ಒಮ್ಮೆ ಆರ್ ಸಿಬಿ ತೊರೆದು ಬೇರೆ ಫ್ರಾಂಚೈಸಿ ಜೊತೆಗೆ ಸೇರುವ ಯೋಚನೆಯನ್ನೂ ಮಾಡಿದ್ದರಂತೆ. ಕೊಹ್ಲಿಗೆ ಸಾಕಷ್ಟು ಫ್ರಾಂಚೈಸಿಗಳಿಂದ ಬೇಡಿಕೆಯಿದೆ. ಹೀಗಾಗಿ ಯಾಕೆ ತಮ್ಮನ್ನು ಹರಾಜಿಗೆ ಒಳಪಡಿಸಿಕೊಳ್ಳಬಾರದು ಎಂದು ಕೊಹ್ಲಿ ಯೋಚಿಸಿದ್ದರಂತೆ. ಆದರೆ ಅದರಿಂದ