ಮತ್ತೆ ಅಭ್ಯಾಸಕ್ಕೆ ಮರಳಿರುವ ವಿರಾಟ್ ಕೊಹ್ಲಿಗೆ ಸಾಥ್ ಕೊಟ್ಟವರು ಯಾರು ಗೊತ್ತೇ?!

ಮುಂಬೈ| Krishnaveni K| Last Modified ಮಂಗಳವಾರ, 23 ನವೆಂಬರ್ 2021 (12:31 IST)
ಮುಂಬೈ: ಟಿ20 ವಿಶ್ವಕಪ್ ಬಳಿಕ ಕೆಲವು ದಿನಗಳ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ನಾಯಕ
ವಿರಾಟ್ ಕೊಹ್ಲಿ ಈಗ ಮತ್ತೆ ಅಭ್ಯಾಸಕ್ಕೆ ಮರಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ವೇಳೆಗೆ ಅವರು ತಂಡ ಕೂಡಿಕೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಈಗಾಗಲೇ ಅವರು ಅಭ್ಯಾಸಕ್ಕೆ ಮರಳಿದ್ದಾರೆ.


ತಮ್ಮ ಅಭ್ಯಾಸದ ನಡುವೆ ತೆಗೆದ ವಿಶೇಷ ಫೋಟೋವೊಂದನ್ನು ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ಕೊಹ್ಲಿ ವಿಶ್ರಾಂತಿ ವೇಳೆ ಬೆಕ್ಕೊಂದರ ಜೊತೆ ಆಡುವ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮಗೆ ರಿಲ್ಯಾಕ್ಸ್ ಆಗಲು ಒಳ್ಳೆ ಸಂಗಾತಿ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :