ಸಹಾಯಕ ಸಿಬ್ಬಂದಿಗಳ ಆಯ್ಕೆ ವಿಚಾರದಲ್ಲಿ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ನಡುವೆ ಭಿನ್ನಾಭಿಪ್ರಾಯ

ಮುಂಬೈ, ಮಂಗಳವಾರ, 3 ಸೆಪ್ಟಂಬರ್ 2019 (09:34 IST)

ಮುಂಬೈ: ಟೀಂ ಇಂಡಿಯಾಗೆ ಮತ್ತೊಮ್ಮೆ ಕೋಚ್ ಆಗಿ ರವಿಶಾಸ್ತ್ರಿಯೇ ಪುನರಾಯ್ಕೆಯಾದ ಬಳಿಕ ಇದೀಗ ಸಹಾಯಕ ಸಿಬ್ಬಂದಿಗಳ ಆಯ್ಕೆ ಪ್ರಕ್ರಿಯೆಯನ್ನು ಬಿಸಿಸಿಐ ಮಾಡುತ್ತಿದೆ.

 


ಈ ನಡುವೆ ಸಹಾಯಕ ಸಿಬ್ಬಂದಿ ಆಯ್ಕೆ ವಿಚಾರದಲ್ಲಿ ನಾಯಕ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ. ಬಿಸಿಸಿಐ ಸದ್ಯಕ್ಕೆ ನಿಕ್ ವೆಬ್, ಲ್ಯೂಕ್ ವುಡ್ ಹೌಸ್ ಮತ್ತು ರಜನೀಕಾಂತ್ ಶಿವಜ್ಞಾನಮ್ ಎಂಬ ಮೂವರು ಸಹಾಯಕ ಸಿಬ್ಬಂದಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಇವರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಚ್ ಮತ್ತು ನಾಯಕನ ಅಭಿಪ್ರಾಯ ಕೇಳಿದೆ.
 
ಆದರೆ ರವಿಶಾಸ್ತ್ರಿ ಸಹಾಯಕ ಸಿಬ್ಬಂದಿಯಾಗಿ ಭಾರತೀಯರೇ ಇರಲಿ ಎಂದು ಆಗ್ರಹಿಸಿದರೆ, ಕೊಹ್ಲಿ ದೇಶ ಮುಖ್ಯವಲ್ಲ, ಅತ್ಯುತ್ತಮ ಸಿಬ್ಬಂದಿಗಳನ್ನು ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರೂ ಈ ವಿಚಾರದಲ್ಲಿ ಅಭಿಪ್ರಾಯ ವೈರುಧ್ಯ ಹೊಂದಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಾಯಕನಾಗಿ ವಿರಾಟ್ ಕೊಹ್ಲಿ ಈಗ ಟೀಂ ಇಂಡಿಯಾ ನಾಯಕರಿಗೇ ನಂ.1

ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆಲ್ಲುವುದರೊಂದಿಗೆ ...

news

ಡೆಲ್ಲಿ ಪರ ದೇಶೀಯ ಕ್ರಿಕೆಟ್ ಆಡ್ತಾರಾ ವಿರಾಟ್ ಕೊಹ್ಲಿ?

ನವದೆಹಲಿ: ಟೀಂ ಇಂಡಿಯಾ ನಾಯಕರಾದ ಮೇಲೆ ಬ್ಯುಸಿಯಾಗಿರುವ ವಿರಾಟ್ ಕೊಹ್ಲಿ ಇದೀಗ ತಮ್ಮ ತವರು ದೆಹಲಿಯ ವಿಜಯ್ ...

news

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್

ಕೋಲ್ಕೊತ್ತಾ: ಟೀಂ ಇಂಡಿಯಾ ಪ್ರಮುಖ ವೇಗಿ ಮೊಹಮ್ಮದ್ ಶಮಿ ವಿರುದ್ಧ ಕೋಲ್ಕೊತ್ತಾದ ನ್ಯಾಯಾಲಯ ಬಂಧನ ...

news

ವಿಂಡೀಸ್ ವಿರುದ್ಧ ಟೀಂ ಇಂಡಿಯಾ ದಿಗ್ವಿಜಯ

ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು 257 ರನ್ ಗಳೊಂದಿಗೆ ...