ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಯುಗಾಂತ್ಯ?!

ಮುಂಬೈ| Krishnaveni K| Last Modified ಮಂಗಳವಾರ, 14 ಸೆಪ್ಟಂಬರ್ 2021 (12:02 IST)
ಮುಂಬೈ: ಟೀಂ ಇಂಡಿಯಾದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನಾಯಕ ವಿರಾಟ್ ಕೊಹ್ಲಿ-ಕೋಚ್ ರವಿಶಾಸ್ತ್ರಿಯದ್ದೇ ಪಾರುಪತ್ಯ. ಆದರೆ ಈಗ ಇಬ್ಬರ ಯುಗಾಂತ್ಯವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
 > ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ಸ್ಥಾನದಲ್ಲಿ ಮುಂದುವರಿಯಲು ರವಿಶಾಸ್ತ್ರಿ ಆಸಕ್ತಿ ಹೊಂದಿಲ್ಲ ಎಂದು ಇತ್ತೀಚೆಗೆ ಸುದ್ದಿ ಬಂದಿತ್ತು. ಹೇಗಿದ್ದರೂ ಅಕ್ಟೋಬರ್ ಬಳಿಕ ಅವರ ಗುತ್ತಿಗೆ ಅವಧಿ ಮುಗಿಯಲಿದೆ. ಅದಾದ ಬಳಿಕ ಮತ್ತೊಂದು ಅವಧಿಗೆ ಮುಂದುವರಿಯಲು ಅವರಿಗೆ ಇಷ್ಟವಿಲ್ಲ ಎನ್ನಲಾಗಿದೆ.>   ಒಂದು ವೇಳೆ ರವಿಶಾಸ್ತ್ರಿ ಕೋಚ್ ಸ್ಥಾನದಿಂದ ಕೆಳಗಿಳಿದರೆ ಕೊಹ್ಲಿ-ಶಾಸ್ತ್ರಿ ಯುಗಾಂತ್ಯವಾಗಲಿದೆ. ವಿರಾಟ್ ಕೊಹ್ಲಿ ಬಳಗಕ್ಕೆ ಹೊ ಕೋಚ್ ಜೊತೆಗೆ ಸಹಾಯಕ ಸಿಬ್ಬಂದಿಗಳೂ ಬದಲಾಗಬಹುದು.ಇದರಲ್ಲಿ ಇನ್ನಷ್ಟು ಓದಿ :