ವಿರಾಟ್ ಕೊಹ್ಲಿಯ ದಾಖಲೆಯ ದ್ವಿಶತಕ: ಟೀಂ ಇಂಡಿಯಾ ಹಿಡಿತದಲ್ಲಿ ದ.ಆಫ್ರಿಕಾ

ಪುಣೆ, ಶುಕ್ರವಾರ, 11 ಅಕ್ಟೋಬರ್ 2019 (17:48 IST)

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆಯ ದ್ವಿಶತಕ ದಾಖಲಿಸಿದ್ದಾರೆ. ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 601 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.


 
ದ.ಆಫ್ರಿಕಾ ದಿನದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿತ್ತು. ಭಾರತದ ಮೊದಲ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಅಜೇಯ 254 ರನ್ ಗಳಿಸಿದರು. ಉಪ ನಾಯಕ ಅಜಿಂಕ್ಯಾ ರೆಹಾನೆ 59 ರನ್ ಗಳಿಸಿ ಔಟಾದರು. ಈ ದ್ವಿಶತಕದ ಮೂಲಕ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ನಾಯಕನಾಗಿ ಅತೀ ಹೆಚ್ಚು 150 ಪ್ಲಸ್ ರನ್ ಗಳಿಸಿದ ದಾಖಲೆ ಮಾಡಿದರು. ಬ್ರಾಡ್ಮನ್ 8 ಬಾರಿ ಈ ಸಾಧನೆ ಮಾಡಿದ್ದರೆ ಕೊಹ್ಲಿ ಇದೀಗ 9 ನೇ ಬಾರಿ ಈ ಸಾಧನೆ ಮಾಡಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟಾಲಿವುಡ್ ನಟಿ ಜತೆ ಕ್ರಿಕೆಟಿಗ ಮನೀಶ್ ಪಾಂಡೆ ವಿವಾಹ?!

ಬೆಂಗಳೂರು: ಟೀಂ ಇಂಡಿಯಾ ಏಕದಿನ ತಂಡದ ಬ್ಯಾಟ್ಸ್ ಮನ್, ಕನ್ನಡಿಗ ಮನೀಶ್ ಪಾಂಡೆ ವೈವಾಹಿಕ ಜೀವನಕ್ಕೆ ...

news

ನಿಧಾನಿ ಚೇತೇಶ್ವರ ಪೂಜಾರ ಬ್ಯಾಟ್ ನಿಂದ ಸಿಕ್ಸರ್ ಸಿಡಿದರೂ ದಾಖಲೆಯೇ!

ಪುಣೆ: ಚೇತೇಶ‍್ವರ ಪೂಜಾರ ಎಂದರೆ ಪಕ್ಕಾ ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಕ್ರಿಕೆಟಿಗ. ಅವರು ...

news

ಗಂಭೀರ್ ಪ್ರಕಾರ ವಿಶ್ವದ ಶ್ರೇಷ್ಟ ಬ್ಯಾಟ್ಸ್ ಮನ್ ಕೊಹ್ಲಿಯೂ ಅಲ್ಲ, ಸ್ಟೀವ್ ಸ್ಮಿತ್ ಕೂಡಾ ಅಲ್ಲ!

ನವದೆಹಲಿ: ಹಾಲಿ ಕ್ರಿಕೆಟಿಗರ ಪೈಕಿ ಶ್ರೇಷ್ಟ ಬ್ಯಾಟ್ಸ್ ಮನ್ ಯಾರು ಎಂದು ಕೇಳಿದರೆ ಎಲ್ಲರೂ ಹೇಳುವುದು ...

news

ಮಯಾಂಕ್ ಅಗರ್ವಾಲ್ ಶತಕ ಸಿಡಿಸಿದರೆ ಬೈಸಿಕೊಂಡಿದ್ದು ಕೆಎಲ್ ರಾಹುಲ್

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ...