ಪರ್ತ್: ಟಿ20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗರು ಅಭ್ಯಾಸ ಪಂದ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಆದರೆ ವಿರಾಟ್ ಕೊಹ್ಲಿ ಇದುವರೆಗೆ ಅಭ್ಯಾಸ ಪಂದ್ಯದಲ್ಲಿ ಆಡಿಲ್ಲ. ಹಾಗಂತ ಅವರು ಸುಮ್ಮನೇ ಕೂತಿಲ್ಲ. ನೆಟ್ಸ್ ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.ಅವರು ಎಷ್ಟು ಗಂಭೀರವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆಂದರೆ ನೆಟ್ಸ್ ಪ್ರ್ಯಾಕ್ಟೀಸ್ ವೇಳೆ ತಮ್ಮ ಅವಧಿ ಮುಗಿದರೂ ಅಭ್ಯಾಸ ನಡೆಸುತ್ತಿದ್ದರು. ಕೊನೆಗೆ ಸಹಾಯಕ ಸಿಬ್ಬಂದಿ ಬಂದು ವಿರಾಟ್ ನಿಮ್ಮ ಅವಧಿ ಮುಗಿದಿದೆ. ನೀವು ಹೋಗಬಹುದು ಎಂದು