Widgets Magazine

ಕ್ಯಾಪ್ಟನ್ ಗೇ ಸ್ಲೆಡ್ಜ್ ಮಾಡ್ತೀಯಾ? ಜಸ್ಪ್ರೀತ್ ಬುಮ್ರಾಗೆ ವಿರಾಟ್ ಕೊಹ್ಲಿ ಧಮ್ಕಿ!

ಬೆಂಗಳೂರು| Krishnaveni K| Last Modified ಶುಕ್ರವಾರ, 1 ಮಾರ್ಚ್ 2019 (09:07 IST)
ಬೆಂಗಳೂರು: ಇನ್ನೇನು ಐಪಿಎಲ್ ಶುರುವಾಗಲಿದೆ. ಟೀಂ ಇಂಡಿಯಾದಲ್ಲಿ ಇಷ್ಟು ದಿನ ಒಟ್ಟಾಗಿ ಆಡಿದವರೆಲ್ಲಾ ಈಗ ಎದುರಾಳಿಗಳಾಗಲಿದ್ದಾರೆ. ಇದೀಗ ಟೀಂ ಇಂಡಿಯಾ ಆಟಗಾರರ ನಡುವೆ ಜಾಹೀರಾತಿನಲ್ಲಿ ಸ್ಟಾರ್ ವಾರ್ ಶುರುವಾಗಿದೆ.

 
ಐಪಿಎಲ್ ಆರಂಭಕ್ಕೂ ಮೊದಲು ಬೇರೆ ಬೇರೆ ತಂಡಗಳ ಪ್ರಮುಖ ಆಟಗಾರರನ್ನು ಒಳಗೊಂಡ ಜಾಹೀರಾತು ಸವಾಲು ಆರಂಭವಾಗಿದ್ದು, ಇದರಲ್ಲಿ ಮೊದಲು ಮುಂಬೈ ಇಂಡಿಯನ್ಸ್ ಪರ ಆಡುವ ವೇಗಿ ಜಸ್ಪ್ರೀತ್ ಬುಮ್ರಾ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಸವಾಲು ಹಾಕಿದ್ದರು. ಈ ಬಾರಿ ನಾವು ಒಂದೇ ತಂಡದಲ್ಲಿ ಆಡುತ್ತಿಲ್ಲ. ನಾನು ಬರ್ತಿದ್ದೀನಿ ‘ಚೀಕೂ ಬಯ್ಯಾ’. ನೋಡಿಕೊಳ್ತೀನಿ ನಿಮ್ಮನ್ನು ಎಂದು ಬುಮ್ರಾ ಜಾಹೀರಾತಿನಲ್ಲಿ ಸವಾಲು ಹಾಕಿದ್ದರು.
 
ಇದಕ್ಕೀಗ ಆರ್ ಸಿಬಿ ಕಡೆಯಿಂದ ಪ್ರತ್ಯುತ್ತರದ ಜಾಹೀರಾತು ಪ್ರಸಾರವಾಗಿದೆ. ಅದರಲ್ಲಿ ಕೊಹ್ಲಿ ಬುಮ್ರಾಗೆ ಪ್ರತಿಸವಾಲು ಹಾಕಿದ್ದು, ‘ಕ್ಯಾಪ್ಟನ್ ಗೇ ಸ್ಲೆಡ್ಜ್ ಮಾಡ್ತೀಯಾ? ಅದೂ ನನ್ನನ್ನು ಚೀಕೂ ಬಯ್ಯಾ ಅಂತೀಯಾ? ನೋಡೋಣ. ಚೀಕೂ ಬಯ್ಯಾನಿಂದ ಯಾರೂ ಹೆಚ್ಚಿಗೆ ಲಾಭ ಪಡೆಯುವ ನಿರೀಕ್ಷೆ ಇಟ್ಟುಕೊಳ್ಳಬೇಡಿ’ ಎಂದಿದ್ದಾರೆ. ಈ ಫನ್ನಿ ವಿಡಿಯೋಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :