ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮರಳಿ ತಂಡ ಕೂಡಿಕೊಂಡಿದ್ದಾರೆ.ಆಫ್ರಿಕಾ ಸರಣಿಗೆ ಕೆಲವೇ ದಿನ ಬಾಕಿಯಿರುವಾಗ ಕೌಟುಂಬಿಕ ಕಾರಣಗಳಿಗೆ ಕೊಹ್ಲಿ ತಂಡ ಬಿಟ್ಟು ತೆರಳಿದ್ದರು. ಆಗ ಅಭಿಮಾನಿಗಳಿಗೆ ಆತಂಕವಾಗಿತ್ತು. ಕೊಹ್ಲಿ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಿರುತ್ತಾರೋ ಎಂದು ಅನುಮಾನ ಕಾಡಿತ್ತು.ಆದರೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗುವ ಎರಡು ದಿನ ಮುಂಚೆಯೇ ಕೊಹ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದು ಅಭಿಮಾನಿಗಳಿಗೆ ಸಮಾಧಾನ ತಂದಿದೆ. ಅಂತೂ