ಮುಂಬೈ: ಮುಂಬರುವ ದ.ಆಫ್ರಿಕಾ ಪ್ರವಾಸದ ಮೇಲೆ ಒಮಿಕ್ರಾನ್ ವೈರಸ್ ಭೀತಿಯಿದೆ. ಆಫ್ರಿಕಾ ನಾಡಿನಲ್ಲಿ ವೈರಸ್ ಹೆಚ್ಚಾಗಿರುವುದರಿಂದ ಅಲ್ಲಿಗೆ ಪ್ರಯಾಣ ಬೆಳೆಸುವ ಬಗ್ಗೆ ಟೀಂ ಇಂಡಿಯಾದಲ್ಲಿ ಗೊಂದಲಗಳಿವೆ.ಈ ಬಗ್ಗೆ ರಾಹುಲ್ ದ್ರಾವಿಡ್ ಈಗಾಗಲೇ ತಂಡದ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.‘ರಾಹುಲ್ ಭಾಯ್ ಹಿರಿಯ ಆಟಗಾರರೊಂದಿಗೆ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅಲ್ಲಿಗೆ ಹೋದ ಬಳಿಕ ಕ್ರಿಕೆಟ್ ಬಿಟ್ಟು ಬೇರೆ ಕಡೆಗೆ ನಮ್ಮ ಗಮನವಿಡುವ ಪರಿಸ್ಥಿತಿ ಬರಬಾರದು.