ಮುಂಬೈ: ಟೀಂ ಇಂಡಿಯಾ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿರಬಹುದು. ಹಾಗಿದ್ದರೂ ಈಗಲೂ ತಾವು ನಾಯಕನೇ ಎಂದು ಹೇಳಿಕೊಂಡಿದ್ದಾರೆ.ತಂಡದಲ್ಲಿ ನಾಯಕನಾಗಿರಬೇಕೆಂದರೆ ಕ್ಯಾಪ್ಟನ್ ಎಂದ ಪಟ್ಟದ ಅಗತ್ಯವಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದ ಮೇಲೆ ಕೊಹ್ಲಿ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.‘ಎಂಎಸ್ ಧೋನಿಯನ್ನು ನೋಡಿ. ಅವರಿಗೆ ನಾಯಕತ್ವದ ಪಟ್ಟವಿದ್ದರೂ ಇಲ್ಲದೇ ಇದ್ದರೂ ಅವರು ನಾಯಕನಾಗಿಯೇ ಇದ್ದರು. ಅವರ ಬಳಿ ಏನೇ ಇದ್ದರೂ ಹಂಚಿಕೊಳ್ಳಬಹುದಿತ್ತು. ನನಗೂ ಹಾಗೆಯೇ