ಮುಂಬೈ: ಪ್ರತೀ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಾರೆ. ಆದರೆ ಇದು ನಿಜವಾಗಲೇ ಇಲ್ಲ.ಒಂದು ವೇಳೆ ಈ ಬಾರಿಯೇನಾದರೂ ಆರ್ ಸಿಬಿ ಪ್ರಶಸ್ತಿ ಗೆದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ತಕ್ಕ ಪ್ರತಿಕ್ರಿಯೆಯನ್ನೇ ಕೊಟ್ಟಿದ್ದಾರೆ.‘ಒಂದು ವೇಳೆ ಈ ಬಾರಿ ಪ್ರಶಸ್ತಿ ಗೆದ್ದರೆ ನಾನು ಮೊದಲು ಎಬಿಡಿ ವಿಲಿಯರ್ಸ್ ರನ್ನು ನೆನೆಸಿಕೊಳ್ಳುತ್ತೇನೆ’ ಎಂದು ಕೊಹ್ಲಿ ಹೇಳಿದ್ದಾರೆ. ಕಳೆದ ಋತುವಿನವರೆಗೂ