ಲೀಡ್ಸ್: ಸತತ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿರುವ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ರನ್ನು ಸಂಪರ್ಕಿಸಿ ಸಲಹೆ ಪಡೆಯಲು ಸುನಿಲ್ ಗವಾಸ್ಕರ್ ಸೂಚಿಸಿದ್ದಾರೆ.ಕೊಹ್ಲಿ ಆಧುನಿಕ ಕ್ರಿಕೆಟ್ ನ ದಿಗ್ಗಜ ಬ್ಯಾಟ್ಸ್ ಮನ್. ಆದರೆ ಕಳೆದ ಎರಡು ವರ್ಷದಿಂದ ಅವರ ಬ್ಯಾಟಿಂಗ್ ಕಳೆಗುಂದಿದೆ. ಹೀಗಾಗಿ ತಕ್ಷಣವೇ ಅವರು ತಮ್ಮ ಬ್ಯಾಟಿಂಗ್ ಸರಿಪಡಿಸಿಕೊಳ್ಳಬೇಕಿದೆ. ಇದನ್ನು ಸರಿಪಡಿಸುವುದು ಹೇಗೆ ಎಂದು ತಿಳಿಯಲು ಕೊಹ್ಲಿ ತಕ್ಷಣವೇ ಸಚಿನ್ ಗೆ ಕರೆ ಮಾಡಿ ಸಲಹೆ