ಮೈದಾನದಲ್ಲಿ ಎತ್ತಲೋ ಜ್ಞಾನ! ಮಯಾಂಕ್ ಮೇಲೆ ಸಿಟ್ಟಿಗೆದ್ದ ವಿರಾಟ್ ಕೊಹ್ಲಿ

ಕೇಪ್ ಟೌನ್| Krishnaveni K| Last Modified ಗುರುವಾರ, 13 ಜನವರಿ 2022 (10:44 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್‍ ನ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಫೀಲ್ಡರ್ ಮಯಾಂಕ್ ಅಗರ್ವಾಲ್ ಮೇಲೆ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಮೈದಾನದಲ್ಲಿ ಸಹ ಆಟಗಾರರು ತಪ್ಪು ಮಾಡಿದರೆ ಕೊಹ್ಲಿ ಅಲ್ಲಿಯೇ ಅಸಮಾಧಾನ ಹೊರಹಾಕುತ್ತಾರೆ. ಅದೇ ರೀತಿ ಮಯಾಂಕ್ ಕೂಡಾ ಬೌಂಡರಿ ತಡೆಯುವ ಯತ್ನದಲ್ಲಿರುವಾಗ ಸರಿಯಾಗಿ ನಿಗಾ ವಹಿಸದೇ ಬೌಂಡರಿ ಗೆರೆ ಸ್ಪರ್ಶಿಸಿ ಪ್ರಯತ್ನ ವಿಫಲವಾಗಿಸಿದ್ದು ಕೊಹ್ಲಿ ಸಿಟ್ಟಿಗೆ ಕಾರಣವಾಯಿತು.


ಮಯಾಂಕ್ ಕೊಂಚ ನಿಧಾನಿಯಾಗಿದ್ದರಿಂದ ಈ ರೀತಿಯಾಗಿತ್ತು. ಅವರು ಈ ರೀತಿ ಪ್ರಮಾದವೆಸಗಿದ್ದರಿಂದ ಕೋಪಗೊಂಡ ಕೊಹ್ಲಿ ಕೈ ಸನ್ನೆ ಮೂಲಕವೇ ತಮ್ಮ ಅಸಮಾಧಾನ ಹೊರಹಾಕಿದರು.


ಇದರಲ್ಲಿ ಇನ್ನಷ್ಟು ಓದಿ :