ನವದೆಹಲಿ: ಟೀಂ ಇಂಡಿಯಾ ಮತ್ತು ಅಫ್ಘಾನಿಸ್ತಾನ ನಡುವೆ ಬೆಂಗಳೂರಿನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯವನ್ನು ವಿರಾಟ್ ಕೊಹ್ಲಿ ಮಿಸ್ ಮಾಡಿಕೊಳ್ಳಲಿದ್ದಾರೆ. ಇದರ ಬದಲು ಇಂಗ್ಲೆಂಡ್ ಗೆ ಹಾರಲಿದ್ದಾರೆ.ಜೂನ್ ತಿಂಗಳಲ್ಲಿ ನಡೆಯಲಿರುವ ಈ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡಲಿದ್ದಾರೆ. ಸರ್ರೆ ತಂಡದ ಪರ ಕೊಹ್ಲಿ ಒಂದು ತಿಂಗಳ ಒಪ್ಪಂದಕ್ಕೆ ಸಹಿ ಹಾಕಿರುವುದು ಪಕ್ಕಾ ಆಗಿದೆ.ಈ ಮೂಲಕ ಕೊಹ್ಲಿ ಕೌಂಟಿ ಆಡುತ್ತಾರೆ, ಇಲ್ಲ ಎಂಬ