WDಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಯಶಸ್ವೀ ಕ್ರಿಕೆಟಿಗ ಮಾತ್ರವಲ್ಲ, ಉದ್ಯಮಿಯೂ ಹೌದು. ಕೊಹ್ಲಿ ತಮ್ಮದೇ ಒಡೆತನದ ರೆಸ್ಟೋರೆಂಟ್ ಹೊಂದಿದ್ದಾರೆ.ಇದೀಗ ಮುಂಬೈನಲ್ಲಿ ಕೊಹ್ಲಿ ತಮ್ಮ ಒಡೆತನದ ಹೊಸ ರೆಸ್ಟೋರೆಂಟ್ ಒಂದನ್ನು ತೆರೆದಿದ್ದಾರೆ. ಇದಕ್ಕೆ ಇನ್ನೊಂದು ವಿಶೇಷತೆಯಿದೆ.ಕೊಹ್ಲಿ ಕೆಲವು ದಿನಗಳ ಮೊದಲು ಹಿರಿಯ ನಟ ಕಿಶೋರ್ ಕುಮಾರ್ ಅವರ ಬಂಗಲೆಯನ್ನು ಖರೀದಿಸಿದ್ದರು. ಆ ಬಂಗಲೆಯನ್ನೇ ಈಗ ಕೊಹ್ಲಿ ರೆಸ್ಟೋರೆಂಟ್ ಆಗಿ ಪರಿವರ್ತಿಸಿದ್ದಾರೆ. ಕೊಹ್ಲಿಗೆ ಕಿಶೋರ್ ಕುಮಾರ್ ಎಂದರೆ ವಿಶೇಷ ಪ್ರೀತಿಯಂತೆ.