ಮುಂಬೈ: ಟೀಂ ಇಂಡಿಯಾದಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ ಏಷ್ಯಾ ಕಪ್ ವೇಳೆಗೆ ತಂಡಕ್ಕೆ ಮರಳಲಿದ್ದಾರೆ.ಕುಟುಂಬ ಸಮೇತರಾಗಿ ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದಿರುವ ಕೊಹ್ಲಿ ಈಗ ಮತ್ತೆ ಅಭ್ಯಾಸಕ್ಕೆ ಮರಳಿದ್ದಾರೆ. ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಕೊಹ್ಲಿ ಅಭ್ಯಾಸಕ್ಕೆ ಮರಳಿರುವುದಾಗಿ ಹೇಳಿದ್ದಾರೆ.ಸತತ ವೈಫಲ್ಯದಿಂದ ತೀವ್ರ ಒತ್ತಡದಲ್ಲಿರುವ ವಿರಾಟ್ ಕೊಹ್ಲಿ ಏಷ್ಯಾ ಕಪ್ ನಲ್ಲಿ ಫಾರ್ಮ್ ಗೆ ಬರಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು. ಏಷ್ಯಾಕಪ್ ಟೂರ್ನಿಯಲ್ಲಿ ಭಾರತಕ್ಕೆ ಗೆಲುವು ಕೊಡಿಸುವುದೇ