ಕೂತಲ್ಲಿ ಕೂರಲಾಗದೇ ಚಡಪಡಿಸಿದ ವಿರಾಟ್ ಕೊಹ್ಲಿ!

ಕಟಕ್| Krishnaveni K| Last Modified ಸೋಮವಾರ, 23 ಡಿಸೆಂಬರ್ 2019 (08:57 IST)
ಕಟಕ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಅಂತಿಮ ಏಕದಿನ ಪಂದ್ಯವನ್ನು ರೋಚಕವಾಗಿ 4 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಗೆದ್ದುಕೊಂಡಿದೆ.

 
ಆದರೆ ಅಂತಿಮ ಕ್ಷಣದಲ್ಲಿ ಸೋಲು-ಗೆಲುವಿನ ತೂಗುಯ್ಯಾಲೆಯಾಗುತ್ತಿದ್ದಾಗ ಪೆವಿಲಿಯನ್ ನಲ್ಲಿ ಕೂತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಪರೀತ ಟೆನ್ಷನ್ ನಿಂದ ಕೂತಲ್ಲಿ ಕೂರಲಾಗದೇ ಚಡಪಡಿಸುತ್ತಿದ್ದುದು ಕಂಡುಬಂತು.
 
ಜಡೇಜಾ ಮತ್ತು ಶ್ರಾದ್ಧೂಲ್ ಠಾಕೂರ್ ಪ್ರತೀ ಎಸೆತ ಎದುರಿಸುವಾಗಲೂ ಎದ್ದು ನಿಂತು ಆತಂಕದಿಂದ ನೋಡುತ್ತಿದ್ದ ಕೊಹ್ಲಿ, ಪ್ರತೀ ರನ್ ಹೊಡೆದಾಗಲೂ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು.
 
ಕೊನೆಗೆ ಜಡೇಜಾ ಮತ್ತು ಶ್ರಾದ್ಧೂಲ್ ಗೆಲುವಿನ ರನ್ ಹೊಡೆದು ಪೆವಿಲಿಯನ್ ಗೆ ಮರಳುತ್ತಿದ್ದಾಗ ಎಲ್ಲರಿಗಿಂತ ಮೊದಲು ಓಡಿ ತಮ್ಮದೇ ಶೈಲಿಯಲ್ಲಿ ಬ್ಯಾಟ್ಸ್ ಮನ್ ಗಳ ಅಭಿನಂದಿಸಿ ಖುಷಿಪಟ್ಟರು.
ಇದರಲ್ಲಿ ಇನ್ನಷ್ಟು ಓದಿ :