ಮುಂಬೈ: ಅತ್ತ ಕೌಂಟಿ ಕ್ರಿಕೆಟ್ ಆಡಲು ಒಪ್ಪಂದ ಮಾಡಿಕೊಂಡಿರುವ ವಿರಾಟ್ ಕೊಹ್ಲಿ ಟೀಂ ಇಂಡಿಯಾಕ್ಕೂ ಆಯ್ಕೆಯಾಗಿದ್ದರಿಂದ ಯಾವ ಪಂದ್ಯ ಆಡಬಹುದು ಎಂಬ ಗೊಂದಲ ಮೂಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.ಇಂಗ್ಲೆಂಡ್ ಸರಣಿಗೆ ತಯಾರಾಗಲು ಕೌಂಟಿ ಕ್ರಿಕೆಟ್ ನಲ್ಲಿ ಒಂದು ತಿಂಗಳ ಒಪ್ಪಂದ ಮಾಡಿಕೊಂಡಿರುವ ಕೊಹ್ಲಿಗೆ ಕೌಂಟಿಯೋ, ಟೀಂ ಇಂಡಿಯಾ ಪರ ಟಿ20 ಆಡಬೇಕೋ ಎಂಬ ಗೊಂದಲ ಮೂಡಿತ್ತು.ಇದೀಗ ಕೊಹ್ಲಿ ಪ್ರತಿನಿಧಿಸುತ್ತಿರುವ ಸರ್ರೆ ತಂಡ ಕೌಂಟಿ ಕ್ರಿಕೆಟ್ ನಲ್ಲೇ ಕೊಹ್ಲಿ ಮುಂದುವರಿಯಲಿದ್ದಾರೆ