ದೇಹ ಪ್ರದರ್ಶನ ಮಾಡಿ ಟ್ರೋಲ್ ಗೊಳಗಾದ ವಿರಾಟ್ ಕೊಹ್ಲಿ

ಮುಂಬೈ| Krishnaveni K| Last Modified ಶುಕ್ರವಾರ, 6 ಸೆಪ್ಟಂಬರ್ 2019 (09:17 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಫೋಟೋಗಳ ಮೂಲಕವೇ ಸುದ್ದಿಯಾಗುವ ವಿರಾಟ್ ಈ ಬಾರಿ ಪ್ರಕಟಿಸಿರುವ ಫೋಟೋ ಒಂದರಿಂದಾಗಿ ಟ್ರೋಲ್ ಗೊಳಗಾಗಿದ್ದಾರೆ.

 
ಕೇವಲ ಚೆಡ್ಡಿ ಧರಿಸಿ ಅರೆನಗ್ನರಾಗಿ ತಮ್ಮ ಅಂಗಾಂದ ದರ್ಶನ ಮಾಡುವ ಭಂಗಿಯಲ್ಲಿ ರಸ್ತೆ ಬದಿ ಬೀದಿ ದೀಪದ ಬೆಳಕಿನಲ್ಲಿ ಕುಳಿತಿರುವ ಫೋಟೋವನ್ನು ಕೊಹ್ಲಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ಅದರ ಜತೆಗೆ ನಿಮ್ಮ ಅಂತರಂಗವನ್ನು ತಿಳಿದುಕೊಂಡರೆ ನಿಮ್ಮ ಬಗ್ಗೆ ತಿಳಿಯಲು ಹೊರಗೆ ನೋಡಬೇಕಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
 
ಕೊಹ್ಲಿಯ ಈ ಫೋಟೋ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ನಾನೂ ಇಂಟರ್ನೆಟ್ ಇಲ್ಲದೇ ಹೋದಾಗ ಹೀಗೇ ಆಗುತ್ತೇನೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಬಹುಶಃ ಕೊಹ್ಲಿ ತೆರಿಗೆ ಕಟ್ಟಿ ಬಂದಿರಬೇಕು ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವರು ಏನು ಅನುಷ್ಕಾ ಓಡಿಸಿಬಿಟ್ಟಳಾ ಎಂದು ತಮಾಷೆ ಮಾಡಿದ್ದಾರೆ. ಅಷ್ಟೇ ಅಲ್ಲ, ಕೊಹ್ಲಿ ಬಾಯ್ ನೀವು ವೃತ್ತಿ ಬದಲಿಸಿಬಿಟ್ಟಿರಾ ಹೇಗೆ ಎಂದು ಲೇವಡಿ ಮಾಡಿದ್ದಾರೆ. ಮತ್ತೆ ಕೆಲವರು ನಿಮ್ಮ ಬಾಡಿ ತುಂಬಾ ಹಾಟ್ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :