ಏನೇ ಆದರೂ ವಿಂಡೀಸ್ ಟೂರ್ ಬಿಡಲ್ಲ ವಿರಾಟ್ ಕೊಹ್ಲಿ

ಮುಂಬೈ, ಸೋಮವಾರ, 15 ಜುಲೈ 2019 (10:36 IST)

ಮುಂಬೈ: ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ನಡೆಯಲಿದ್ದು, ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಬಹುದು ಎಂಬ ವದಂತಿಯಿತ್ತು.


 
ಆದರೆ ಕೊಹ್ಲಿ ಈ ಸರಣಿಯಿಂದ ಹಿಂದೆ ಸರಿಯದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡದ ನಾಯಕರಾಗಬೇಕಿತ್ತು. ಆದರೆ ಸದ್ಯಕ್ಕೆ ಟೀಂ ಇಂಡಿಯಾದೊಳಗೆ ಕೊಹ್ಲಿ ಮತ್ತು ರೋಹಿತ್ ನಡುವೆ ವೈಮನಸ್ಯವಿದೆ ಎನ್ನಲಾಗಿದೆ. ಅದರ ನಡುವೆಯೇ ರೋಹಿತ್ ಗೆ ನಾಯಕತ್ವ ಬಿಟ್ಟುಕೊಟ್ಟು ತಾವು ವಿಶ್ರಾಂತಿ ಪಡೆಯುವ ನಿರ್ಧಾರದಿಂದ ಕೊಹ್ಲಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
 
ಜುಲೈ 19 ರಂದು ತಂಡದ ಆಯ್ಕೆ ನಡೆಯುವ ಸಾಧ್ಯತೆಯಿದೆ. ಆಗಸ್ಟ್ 3 ರಿಂದ ಸೆಪ್ಟೆಂಬರ್ 3 ರವರೆಗೆ ಭಾರತ ವಿಂಡೀಸ್ ನಲ್ಲಿ ಟಿ20, ಏಕದಿನ ಮತ್ತು ಟೆಸ್ಟ್ ಸರಣಿ ಆಡಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ಫೈನಲ್ ನಲ್ಲಿ ಭಾರತವಿಲ್ಲದೇ ದುಬಾರಿ ಮೊತ್ತದ ಹಣ ಕಳೆದುಕೊಂಡ ಸ್ಟಾರ್ ಸ್ಪೋರ್ಟ್ಸ್

ಲಂಡನ್: ನಿರೀಕ್ಷೆಯಂತೆ ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಗೆ ಬಾರದೇ ಇದ್ದ ಕಾರಣ, ಅಧಿಕೃತ ನೇರ ಪ್ರಸಾರ ...

news

ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ವಿರುದ್ಧ ಕೆಂಡಾಮಂಡಲರಾದ ಯುವರಾಜ್ ಸಿಂಗ್

ಮುಂಬೈ: ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ಸೋಲಿನ ಬಳಿಕ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ...

news

ವಿಶ್ವಕಪ್ 2019: ದಾಖಲೆಯ ಮೂಲಕ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆದ ಇಂಗ್ಲೆಂಡ್

ಲಾರ್ಡ್ಸ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಭಾನುವಾರ ರೋಚಕ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಯಿತು. ಇದೇ ...

news

ವಿಶ್ವಕಪ್ 2019: 12 ವರ್ಷಗಳ ದಾಖಲೆ ಮುರಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್

ಲಂಡನ್: ಇಂಗ್ಲೆಂಡ್ ವಿರುದ್ಧ 2019 ರ ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 12 ...