ವಿರಾಟ್ ಕೊಹ್ಲಿ ಟಾಸ್ ಸೋತರೂ ಗೆಲುವು, ಗೆದ್ದರೆ ಸೋಲು!

ಲೀಡ್ಸ್| Krishnaveni K| Last Modified ಶುಕ್ರವಾರ, 27 ಆಗಸ್ಟ್ 2021 (12:15 IST)
ಲೀಡ್ಸ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ವಿಚಾರದಲ್ಲಿ ಅದೃಷ್ಟವಂತನಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ.
 > ಕೊಹ್ಲಿ ಟಾಸ್ ಸೋಲುವ ವಿಚಾರದಲ್ಲಿ ದಾಖಲೆಯನ್ನೇ ಮಾಡಿದ್ದಾರೆ. ಟಾಸ್ ಗೆಲ್ಲುವುದರಲ್ಲಿ ಅವರಿಗೆ ಅದೃಷ್ಟ ಕೈಕೊಡುತ್ತಲೇ ಇದೆ. ಹಾಗೊಂದು ವೇಳೆ ಟಾಸ್ ಗೆದ್ದರೂ ಅವರ ನಿರ್ಧಾರ ಹಲವು ಬಾರಿ ಕೈಕೊಟ್ಟಿದೆ.>   ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಬೇಕೇ ಫೀಲ್ಡಿಂಗ್ ಮಾಡಬೇಕೇ ಎಂಬ ವಿಚಾರದಲ್ಲಿ ಹಲವು ಬಾರಿ ಅವರು ಎಡವಿದ್ದಾರೆ.  ವಿಚಿತ್ರವೆಂದರೆ ಟಾಸ್ ಸೋತಾಗಲೂ ಅವರು ಪಂದ್ಯ ಕಳೆದುಕೊಂಡಿದ್ದು ಕಡಿಮೆ. ಹೀಗಾಗಿ ಟಾಸ್ ಗೆದ್ದ ಬಳಿಕ ಮೊದಲು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸರಿಯಾದ ತೀರ್ಮಾನ ತೆಗೆದುಕೊಳ್ಳುವುದು ಅವರಿಂದ ಸಾಧ್ಯವಾಗಿಲ್ಲ. ಹೀಗಾಗಿ ಟಾಸ್ ವಿಚಾರದಲ್ಲಿ ಗೆದ್ದರೂ, ಸೋತರೂ ಅವರು ಅದೃಷ್ಟ ಹೀನರೇ ಎನ್ನುವುದು ಸಾಬೀತಾಗಿದೆ.ಇದರಲ್ಲಿ ಇನ್ನಷ್ಟು ಓದಿ :