ಆಸೀಸ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ರನ್ನು ಭಾರತೀಯ ಪ್ರೇಕ್ಷಕರಿಂದ ಕಾಪಾಡಿದ ವಿರಾಟ್ ಕೊಹ್ಲಿ

ಲಂಡನ್, ಸೋಮವಾರ, 10 ಜೂನ್ 2019 (09:10 IST)

ಲಂಡನ್: ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಲ್ ವಿರೂಪ ಪ್ರಕರಣದಲ್ಲಿ ಹಿಂದೊಮ್ಮೆ ನಿಷೇಧಕ್ಕೊಳಗಾಗಿದ್ದ ಕ್ರಿಕೆಟಿಗ ಸ್ಟೀವ್ ಸ್ಮಿತ್ ರನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತೀಯ ಪ್ರೇಕ್ಷಕರಿಂದ ಕಾಪಾಡಿದ್ದಾರೆ.


 
ಸ್ಮಿತ್ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಭಾರತೀಯ ಪ್ರೇಕ್ಷಕರು ಚೀಟರ್ ಚೀಟರ್ ಎಂದು ಕೂಗುತ್ತಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿಗೆ ಇದು ತಿಳಿದು, ತಕ್ಷಣವೇ ಭಾರತೀಯ ಪ್ರೇಕ್ಷಕರತ್ತ ಹಾಗೆ ಕೂಗಬಾರದು ಚಪ್ಪಾಳೆ ತಟ್ಟಿ ಎಂದು ಸನ್ನೆ ಮಾಡಿದರು. ಕೊಹ್ಲಿಯ ಮಾತಿಗೆ ಬೆಲೆಕೊಟ್ಟ ಭಾರತೀಯ ಪ್ರೇಕ್ಷಕರು ಸುಮ್ಮನಾದರು. ಇದರಿಂದ ಸ್ಮಿತ್ ಮುಜುಗರದಿಂದ ಪಾರಾದರು.
 
ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿರುವ ಕೊಹ್ಲಿ ಸ್ಮಿತ್ ಬಳಿ ಭಾರತೀಯ ಪ್ರೇಕ್ಷಕರ ಪರವಾಗಿ ಕ್ಷಮೆ ಕೇಳಿದ್ದಲ್ಲದೆ, ‘ಭಾರತೀಯ ಪ್ರೇಕ್ಷಕರ ಬಗ್ಗೆ ಕೆಟ್ಟ ಕಲ್ಪನೆ ಮೂಡುವುದು ನನಗೆ ಇಷ್ಟವಿರಲಿಲ್ಲ.  ಅದಕ್ಕೇ ಮನವಿ ಮಾಡಿದೆ’ ಎಂದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಕೊನೆಯ ಹತ್ತು ಓವರ್ ಗಳಲ್ಲಿ ಮ್ಯಾಜಿಕ್ ಮಾಡಿದ ಟೀಂ ಇಂಡಿಯಾ ಬೌಲರ್ ಗಳು

ಲಂಡನ್: ಓವಲ್ ನಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 36 ...

news

ವಿಶ್ವಕಪ್ 2019: ಲಕ್ಕಿ ಮೈದಾನದಲ್ಲಿ ವಿಜೃಂಭಿಸಿದ ಶಿಖರ್ ಧವನ್: ಆಸೀಸ್ ಬೌಲರ್ ಗಳು ಬೇಸ್ತು

ಲಂಡನ್: ಓವಲ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ 2019 ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ...

news

ಧೋನಿ ಗ್ಲೌಸ್ ವಿವಾದಕ್ಕೆ ವೀರೇಂದ್ರ ಸೆಹ್ವಾಗ್ ಸೂಚಿಸಿದ ಐಡಿಯಾವೇನು ಗೊತ್ತಾ?

ಲಂಡನ್: ವಿಶ್ವಕಪ್ ಆಡುತ್ತಿರುವ ಧೋನಿ ಮೊದಲ ಪಂದ್ಯದಲ್ಲಿ ಸೇನೆಯ ಬಲಿದಾನ ಚಿಹ್ನೆಯನ್ನು ಗ್ಲೌಸ್ ನಲ್ಲಿ ...

news

ವಿಶ್ವಕಪ್ ಗೆಲ್ಲಲಿ ಎಂದು ವಿರಾಟ್ ಕೊಹ್ಲಿಗೆ ಬಾಲ್ಯದ ಶಾಲೆಯಿಂದ ವಿಶಿಷ್ಟ ಗಿಫ್ಟ್

ನವದೆಹಲಿ: ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಬರಲಿ ಎಂದು ವಿರಾಟ್ ಕೊಹ್ಲಿ ಕಲಿತ ಶಾಲೆಯಿಂದ ಮಣ್ಣು ...