ಮುಂಬೈ: ಟೀಂ ಇಂಡಿಯಾ ಇನ್ನು ಮುಂದೆ ವಿದೇಶ ಪ್ರವಾಸ ಮಾಡುವಾಗ ಪತ್ನಿಯರನ್ನೂ ಕರೆದೊಯ್ಯಲು ಅನುಮತಿ ನೀಡುವಂತೆ ವಿರಾಟ್ ಕೊಹ್ಲಿ ಬಿಸಿಸಿಐ ಮುಂದೆ ಬೇಡಿಕೆಯಿಟ್ಟಿದ್ದಾರೆ.ಸದ್ಯದ ರೂಲ್ಸ್ ಪ್ರಕಾರ ವಿದೇಶ ಪ್ರವಾಸದಲ್ಲಿ ಕ್ರಿಕೆಟಿಗರಿಗೆ ಪ್ರವಾಸದ ಪೂರ್ತಿ ದಿನ ಪತ್ನಿಯರನ್ನು ಜತೆಗಿಟ್ಟುಕೊಳ್ಳುವಂತಿಲ್ಲ. ಆದರೆ ಇದೀಗ ಈ ನಿಯಮ ಸಡಿಲಿಕೆ ಮಾಡಿ ಪ್ರವಾಸದ ಎಲ್ಲಾ ದಿನಗಳಲ್ಲಿ ಪತ್ನಿಯರಿಗೂ ಜತೆಗಿರಲು ಅವಕಾಶ ನೀಡುವಂತೆ ಕೊಹ್ಲಿ ಮನವಿ ಮಾಡಿದ್ದಾರೆ.ಸಾಮಾನ್ಯವಾಗಿ ಕೊಹ್ಲಿ ತಮ್ಮ ಪ್ರವಾಸದಲ್ಲಿ ಪತ್ನಿ ಅನುಷ್ಕಾ ಶರ್ಮಾರನ್ನೂ ಜತೆಗೊಯ್ಯುತ್ತಾರೆ.