ಆಟಗಾರರ ನಡುವೆಯೇ ತಂದಿಡಬೇಡಿ: ಹೀಗಂತ ಕೊಹ್ಲಿ ಎಚ್ಚರಿಸಿದ್ದು ಯಾರಿಗೆ ಗೊತ್ತಾ?

ಪುಣೆ| Krishnaveni K| Last Modified ಶನಿವಾರ, 11 ಜನವರಿ 2020 (09:29 IST)
ಪುಣೆ: ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ವೈಮನಸ್ಯವಿದೆ ಎಂಬ ಪುಕಾರು ತಣ್ಣಗಾಗುತ್ತಿದ್ದಂತೇ ಈಗ ಆರಂಭಿಕ ಸ್ಥಾನಕ್ಕಾಗಿ ಶಿಖರ್ ಧವನ್, ಕೆಎಲ್ ರಾಹುಲ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ ಎಂಬ ವರದಿಗಳು ಬರುತ್ತಿವೆ.
 > ಇದರ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ತಂಡದಲ್ಲಿ ಇಬ್ಬರು ಆಟಗಾರರ ನಡುವೆ ಇಲ್ಲದ ವೈಮನಸ್ಯದ ಬಗ್ಗೆ ಬರೆದು ತಂದಿಡಬೇಡಿ ಎಂದು ಕೊಹ್ಲಿ ಎಚ್ಚರಿಸಿದ್ದಾರೆ.>   ‘ರೋಹಿತ್, ಧವನ್, ರಾಹುಲ್ ಮೂವರೂ ಉತ್ತಮವಾಗಿ ಆಡುತ್ತಿದ್ದಾರೆ. ಇದರಿಂದ ನಮಗೆ ಸಾಕಷ್ಟು ಆಯ್ಕೆ ಸಿಕ್ಕಿದೆ. ಜನ ಇವರ ಬಗ್ಗೆ ಇಲ್ಲದ ವೈಮನಸ್ಯ ಸೃಷ್ಟಿಸಿ ಪಿಟ್ಟಿಂಗ್ ಇಡುವುದು ನಿಲ್ಲಿಸಬೇಕು. ಇದು ಆರೋಗ್ಯಕರ ಬೆಳವಣಿಗೆಯಲ್ಲ. ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿದ್ದಾರೆ ಎಂದು ನಾವು ಸಂತೋಷಪಡಬೇಕು’ ಎಂದು ಕೊಹ್ಲಿ ಖಡಕ್ ಸಂದೇಶ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :