ವಿರಾಟ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಬ್ಯಾಟಿಂಗ್ನಂತೆಯೇ ಆಕ್ರಮಣಶೀಲತೆಗೂ ಸಹ ಹೆಸರುವಾಸಿಯಾಗಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 4 ನೇ ಏಕದಿನ ಪಂದ್ಯದಲ್ಲಿ ವಿರಾಟ್ ಸ್ವಲ್ಪ ಜಾಸ್ತಿ ಎನ್ನುವಂತೆಯೇ ತಮ್ಮ ಆಕ್ರಮಣಕಾರಿ ಮನೋಭಾವವನ್ನು ಪ್ರದರ್ಶಿಸಿದ್ದು ಅನೇಕರಲ್ಲಿ ಅಸಮಾಧಾನವನ್ನುಂಟುಮಾಡಿತ್ತು. ಆದರೆ ಹಲವು ಕ್ರಿಕೆಟ್ ಪರಿಣಿತರ ಪ್ರಕಾರ ಆಕ್ರಮಣ ಶೀಲತೆ ವಿರಾಟ್ ಕೊಹ್ಲಿಯ ಶಕ್ತಿಯಾಗಿದ್ದು ಸ್ಥಿಮಿತದಲ್ಲಿರುವ ಆಕ್ರಮಣಶೀಲತೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ವಿರಾಟ್ ತಮ್ಮ ಆಕ್ರಮಣಶೀಲತೆಯಿಂದ ಅಧಿಕ ರನ್ ಗಳಿಸಲು ಪ್ರಯತ್ನಿಸುತ್ತಾರೆ