ಪುಣೆ: ಅದೊಂದು ಕಾಲವಿತ್ತು. ಟೀಂ ಇಂಡಿಯಾ 60 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಉದುರಿಸಿಕೊಂಡಿತೆಂದರೆ ರೇಡಿಯೋ, ಟಿವಿ ಆಫ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದೆವು. ಆದರೆ ಈ ವಿರಾಟ್ ಪರ್ವದಲ್ಲಿ ಹಾಗೆ ಮಾಡುವ ಹಾಗಿಲ್ಲ ಎಂದು ಕೊಹ್ಲಿ ತೋರಿಸಿಕೊಟ್ಟಿದ್ದಾರೆ.ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 350 ರನ್ ರಾಶಿ ಹಾಕಿದಾಗ ಗೆಲುವು ಸುಲಭವಲ್ಲ ಎಂದು ಅನಿಸಿತ್ತಷ್ಟೆ. ಆದರೆ 100 ರನ್ ಗಳಿಸುವ ಮೊದಲೇ ಪ್ರಮುಖರೆಲ್ಲಾ ಪೆವಿಲಿಯನ್ ನಲ್ಲಿ ಕೂತಾಗ ಇನ್ನು ಹೀನಾಯವಾಗಿ ಸೋಲದಿದ್ದರೆ