ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯ ಸೋತಿರುವ ಟೀಂ ಇಂಡಿಯಾಗೆ ಈಗ ಅಂತಿಮ ಏಕದಿನ ಗೆಲ್ಲಲೇಬೇಕಾದ ಪರಿಸ್ಥಿತಿ ಬಂದಿದೆ.ಸರಣಿ ಈಗ 1-1 ರಿಂದ ಸಮಬಲವಾಗಿದ್ದು, ಇಂದು ಎರಡೂ ತಂಡಕ್ಕೆ ಮಾಡು ಇಲ್ಲವೇ ಮಡಿ ಸ್ಥಿತಿ. ಕಳೆದ ಕೆಲವು ದಿನಗಳಿಂದ ತಂಡದ ಆಯ್ಕೆ ವಿಚಾರದಲ್ಲಿ ನಾಯಕ ಕೊಹ್ಲಿ ಟೀಕೆಗೊಳಗಾಗುತ್ತಲೇ ಇದ್ದಾರೆ.ಈ ನಡುವೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ವಿರಾಟ್ ಕೊಹ್ಲಿಗೆ ತಂಡದಲ್ಲಿ ಕೆಲವು ಬದಲಾವಣೆ ಮಾಡಲು ಸಲಹೆ