ತಿರುವನಂತಪುರಂ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ ದಾಖಲೆಯ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿದೆ.ಟೀಂ ಇಂಡಿಯಾ ಬೌಲರ್ ಗಳ ಸಾಂಘಿಕ ದಾಳಿಗೆ ಕುಸಿದ ವಿಂಡೀಸ್ 31.5 ಓವರ್ ಗಳಲ್ಲಿ ಕೇವಲ 104 ಕ್ಕೆ ಆಲೌಟ್ ಆಗಿದೆ. ಇದು ಭಾರತದ ವಿರುದ್ಧ ವಿಂಡೀಸ್ ಗಳಿಸಿದ ಕನಿಷ್ಠ ಮೊತ್ತವಾಗಿದೆ.ಭಾರತಕ್ಕೆ ಆರಂಭದಲ್ಲೇ ಬ್ರೇಕ್ ಕೊಟ್ಟಿದ್ದು ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ.