ಮುಂಬೈ: ಟೀಂ ಇಂಡಿಯಾ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಆಡಲು ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಪ್ರಯಾಣ ಬೆಳೆಸಿದೆ.ಭಾರತಕ್ಕೆ ವಿಮಾನವೇರುವ ಮುನ್ನ ಮಾತನಾಡಿರುವ ವಿಂಡೀಸ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಭಾರತವನ್ನು ಅದರ ನೆಲದಲ್ಲೇ ಸೋಲಿಸುತ್ತೇವೆ ಎಂದು ಚಾಲೆಂಜ್ ಹಾಕಿದ್ದಾರೆ.ಫೆಬ್ರವರಿ 6 ರಿಂದ ಅಹಮ್ಮದಾಬಾದ್ ನಲ್ಲಿ ಏಕದಿನ ಸರಣಿ ಆರಂಭವಾಗಲಿದೆ. ಅದಾದ ಬಳಿಕ ಫೆಬ್ರವರಿ 16 ರಿಂದ ಕೋಲ್ಕೊತ್ತಾದಲ್ಲಿ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.