ಲಾರ್ಡ್ಸ್: ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಸೋತ ಮೇಲೆ ಯಾವ ತಂಡವೂ ಸಾಮಾನ್ಯವಾಗಿ ನಂತರದ ಪಂದ್ಯದಲ್ಲಿ ಅದೇ ತಪ್ಪನ್ನು ಮಾಡುವುದಿಲ್ಲ. ಆದರೆ ಇಂಗ್ಲೆಂಡ್ ಅದನ್ನೇ ಮಾಡಿದೆ.ದ್ವಿತೀಯ ಏಕದಿನ ಪಂದ್ಯದಲ್ಲಿ ತಾವು ಟಾಸ್ ಗೆದ್ದರೂ ಇಯಾನ್ ಮಾರ್ಗನ್ ಮತ್ತೆ ಮೊದಲು ಬ್ಯಾಟಿಂಗ್ ಮಾಡುವುದಾಗಿ ಹೇಳಿಕೊಂಡರು. ಇದು ಹಲವರನ್ನು ಅಚ್ಚರಿಗೆ ದೂಡಿತು. ಅದರಲ್ಲೂ ಟೀಂ ಇಂಡಿಯಾ ಚೇಸ್ ಮಾಡುವುದರಲ್ಲಿ ಯಾವತ್ತೂ ಮುಂದು ಎನ್ನುವ ಕಾರಣಕ್ಕೆ ಯಾವ ತಂಡವೂ ಈ ದುಸ್ಸಾಹಸ