Photo Courtesy: Twitterಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಿ ಲೋಕಾರ್ಪಣೆ ಮಾಡಲಾಗಿದೆ.ಸಚಿನ್ ಲಾಫ್ಟೆಡ್ ಶಾಟ್ ಹೊಡೆಯುವ ಭಂಗಿಯಲ್ಲಿರುವ ಈ ಪ್ರತಿಮೆಯನ್ನು ಸ್ವತಃ ಸಚಿನ್ ಅನಾವರಣಗೊಳಿಸಿದ್ದರು. ಯುವ ಕ್ರಿಕೆಟಿಗರಿಗೆ ಸ್ಪೂರ್ತಿ ಸಿಗಲಿ ಎನ್ನುವ ಕಾರಣಕ್ಕೆ ಮೈದಾನದಲ್ಲಿ ಎಲ್ಲರಿಗೂ ಕಾಣುವಂತೇ ಪ್ರತಿಮೆ ಸ್ಥಾಪಿಸಲಾಗಿದೆ.ಅಂದ ಹಾಗೆ, ಈ ಪ್ರತಿಮೆಯಲ್ಲಿ ಸಚಿನ್ ಹೊಡೆದ ಶಾಟ್ ಅವರು ತಮ್ಮ ವೃತ್ತಿ ಜೀವನದಲ್ಲಿ ಹೊಡೆದಿದ್ದು ಯಾವಾಗ ಗೊತ್ತಾ?