ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಹೊಡೆದು ಗೆಲುವು ಸಾಧಿಸಿದೊಡನೆ ಟೀಂ ಇಂಡಿಯಾ ಆಟಗಾರರು ಕುಣಿದು ಕುಪ್ಪಳಿಸುತ್ತಿದ್ದರೆ ಬಾಂಗ್ಲಾ ಕ್ರಿಕೆಟಿಗರು ಏನು ಮಾಡ್ತಾ ಇದ್ದರು ಗೊತ್ತಾ?ಸಿಕ್ಸರ್ ಬಾರಿಸಿದ ತಕ್ಷಣ ಅಂಗಳಕ್ಕೆ ನುಗ್ಗಿದ ಟೀಂ ಇಂಡಿಯಾ ಕ್ರಿಕೆಟಿಗರು ಕಾರ್ತಿಕ್ ಗೆ ಉಸಿರಾಡಲೂ ಅವಕಾಶ ಕೊಡದಂತೆ ತಬ್ಬಿ ಮುದ್ದಾಡಿದರು. ಇತ್ತ ಗ್ಯಾಲರಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದ ಭಾರತದ ಬೆಂಬಲಿಗರೂ ಹುಚ್ಚೆದ್ದು ಕುಣಿದರು.ಆದರೆ ಅತ್ತ ಕೈಗೆ ಬಂದ ತುತ್ತು ಬಾಯಿಗೆ