ದುಬೈ: ಐಪಿಎಲ್ ಜಾತ್ರೆ ಮುಗಿದಿದ್ದು, ಇದೀಗ ಕ್ರಿಕೆಟ್ ಜಗತ್ತು ಮಿನಿ ವಿಶ್ವಕಪ್ ಮಹಾಸಮರಕ್ಕೆ ಸಿದ್ಧವಾಗುತ್ತಿದೆ. ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಓಪನರ್ ಗಳು ಯಾರಾಗಬಹುದು ಎಂಬ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.ಟೀಂ ಇಂಡಿಯಾ ಓಪನರ್ ಆಗಿ ಈ ಹಿಂದೆ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಓಪನಿಂಗ್ ಮಾಡಿದ್ದರು. ಆದರೆ ಟಿ20 ವಿಶ್ವಕಪ್ ನಲ್ಲಿ ಕೆಎಲ್ ರಾಹುಲ್ ಕೂಡಾ ಆಡುತ್ತಿರುವುದರಿಂದ ಭಾರತದ ಮಧ್ಯಮ ಕ್ರಮಾಂಕಕ್ಕೆ