ಮುಂಬೈ: ಜುಲೈ 13 ರಿಂದ ಆರಂಭವಾಗಲಿರುವ ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಸೀಮಿತ ಓವರ್ ಗಳ ಸರಣಿಗೆ ಆರಂಭಿಕರು ಯಾರು ಎಂಬ ಪ್ರಶ್ನೆ ಮೂಡಿದೆ.ನಾಯಕ ಶಿಖರ್ ಧವನ್ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯಲು ಯುವ ಆಟಗಾರರು ಸರತಿಯಲ್ಲಿದ್ದಾರೆ. ಈಗಾಗಲೇ ಟೀಂ ಇಂಡಿಯಾದಲ್ಲಿ ಅನುಭವವಿರುವ ಪೃಥ್ವಿ ಶಾ ಹಾಗೂ ದೇಶೀಯ ಕ್ರಿಕೆಟ್ ನಲ್ಲಿ ರನ್ ಮಳೆ ಸುರಿಸಿರುವ ದೇವದತ್ತ್ ಪಡಿಕ್ಕಲ್ ನಡುವೆ ತೀವ್ರ ಪೈಪೋಟಿಯಿದೆ.ಹೊಸಬರಿಗೆ ಅವಕಾಶ ನೀಡುವುದಾದರೆ ದೇವದತ್ತ್ ಪಡಿಕ್ಕಲ್ ಗೆ ಅವಕಾಶ ಸಿಗಬಹುದು.