ಸಿಡ್ನಿ: ಆಸ್ಟ್ರೇಲಿಯಾ ಆಟಗಾರರು ಚೆಂಡು ವಿರೂಪ ಪ್ರಕರಣದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿದ್ದಾರೆ. ಒಂದು ಕಾಲದಲ್ಲಿ ತಮ್ಮ ಆಟದ ಮೂಲಕವೇ ವಿಶ್ವವನ್ನು ನಡುಗಿಸುತ್ತಿದ್ದ ಆಸೀಸ್ ಆಟಗಾರರು ಇಂದು ಈ ಹಂತಕ್ಕೆ ಕುಸಿಯಲು ಕಾರಣವೇನು ಗೊತ್ತಾ?ಆಸ್ಟ್ರೇಲಿಯನ್ ಮಾಧ್ಯಮಗಳ ಪ್ರಕಾರ ತಂಡದ ಕೋಚ್ ಲೆಹಮನ್ ಅವರೇ ಕ್ರಿಕೆಟಿಗರ ಈ ದುಃಸ್ಥಿತಿಗೆ ಕಾರಣವಂತೆ. ಸದಾ ಗೆಲುವು, ಗೆಲುವು ಎಂದು ಆಟಗಾರರ ತಲೆ ತುಂಬುತ್ತಿದ್ದ ಕೋಚ್ ಲೆಹಮನ್ ಆಟಗಾರರಲ್ಲಿ ಶಿಸ್ತು ಬೆಳೆಸಲಿಲ್ಲ. ಏನಾದರೂ ಮಾಡು ಗೆಲುವು ತಂದು