ಮುಂಬೈ: ನಿನ್ನೆಯಷ್ಟೇ ಬಿಸಿಸಿಐ ಬಿಡುಗಡೆಗೊಳಿಸಿದ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಮಾಜಿ ನಾಯಕ ಧೋನಿಗೆ ಹಿಂಬಡ್ತಿ ನೀಡಿರುವುದಕ್ಕೆ ಬಿಸಿಸಿಐ ಸ್ಪಷ್ಟನೆ ಕೊಟ್ಟಿದೆ.ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಿ ಕೇವಲ ಕಿರು ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಧೋನಿಗೆ ಎ ಪ್ಲಸ್ ದರ್ಜೆಯ ಗುತ್ತಿಗೆ ನೀಡಲಾಗಿಲ್ಲ ಎಂದು ಬಿಸಿಸಿಐ ಹೇಳಿದೆ.ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಕಾಣಿಸಿಕೊಳ್ಳುವ ವಿರಾಟ್, ರೋಹಿತ್, ಶಿಖರ್ ಧವನ್ ಮತ್ತು ಬುಮ್ರಾಗೆ ಮಾತ್ರ ಎ ಪ್ಲಸ್ ಶ್ರೇಣಿ ನೀಡಲಾಗಿದೆ. ಹೆಚ್ಚು