ಮುಂಬೈ: ರಾಷ್ಟ್ರೀಯ ತಂಡದಲ್ಲಿ ಆಡದ, ಫಾರ್ಮ್ ಕಳೆದುಕೊಂಡ ಕ್ರಿಕೆಟಿಗರು ದೇಶೀಯ ಕ್ರಿಕೆಟ್ ನಲ್ಲಿ ತಮ್ಮ ತವರು ತಂಡದ ಪರ ಆಡಬೇಕೆಂಬುದು ಬಿಸಿಸಿಐ ನಿಯಮ. ಆದರೆ ಧೋನಿ ಮತ್ತು ಶಿಖರ್ ಧವನ್ ಗೆ ಈ ನಿಯಮ ಏಕೆ ಅನ್ವಯವಾಗಿಲ್ಲ ಎಂದು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.ಇಬ್ಬರೂ ಪ್ರಸಕ್ತ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿಲ್ಲ. ಬಿಡುವಿನ ವೇಳೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಈ ಕ್ರಿಕೆಟಿಗರು ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ತಮ್ಮ ತವರು ತಂಡದ