ಮುಂಬೈ: ಇಂಗ್ಲೆಂಡ್ ಸರಣಿಯಲ್ಲಿ ಆಡುವ ಬಳಗದಲ್ಲಿದ್ದೂ ಅವಕಾಶ ಸಿಗಲಿಲ್ಲ. ಇದೀಗ ತವರಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದಲ್ಲೇ ಇಲ್ಲ. ಇದು ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ದ್ವಿತೀಯ ಆಟಗಾರ ಕರುಣ್ ನಾಯರ್ ದುಸ್ಥಿತಿ.ಹಾಗಿದ್ದರೂ ಕರುಣ್ ನಾಯರ್ ಗೆ ಸ್ಥಾನ ನೀಡದೇ ಇರಲು ಕಾರಣವೇನು ಎಂಬುದಕ್ಕೆ ಇದೀಗ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಸಮಜಾಯಿಷಿ ನೀಡಿದ್ದಾರೆ.ಕರುಣ್ ಇಂಗ್ಲೆಂಡ್ ನಲ್ಲಿದ್ದಾಗಲೇ