ಲಂಡನ್|
Krishnaveni K|
Last Updated:
ಬುಧವಾರ, 5 ಜೂನ್ 2019 (11:52 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ಆರಂಭವಾಗಿ ಆಗಲೇ ವಾರವಾಗುತ್ತಾ ಬಂದಿದೆ. ಈಗಾಗಲೇ ಬಹುತೇಕ ತಂಡಗಳಿಗೆ ಎರಡೆರಡು ಲೀಗ್ ಪಂದ್ಯಗಳಾಗಿವೆ. ಆದರೆ ಟೀಂ ಇಂಡಿಯಾ ಮಾತ್ರ ಇಂದು ಮೊದಲ ಪಂದ್ಯವಾಡುತ್ತಿದೆ.
ಇಂದು ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಕೂಟದ ಮೊದಲ ಪಂದ್ಯವಾಡುತ್ತಿದೆಯಷ್ಟೇ. ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿರುವ ಟೀಂ ಇಂಡಿಯಾಗೆ ಇನ್ನೂ ಒಂದೇ ಒಂದು ಪಂದ್ಯವಾಗದೇ ಇರುವುದು ಅಭಿಮಾನಿಗಳ ಅಸಹನೆ ಹೆಚ್ಚಿಸಿದೆ.
ಆದರೆ ಇದಕ್ಕೆ ನಿಜವಾದ ಕಾರಣವೇನೆಂದು ತಿಳಿದುಬಂದಿಲ್ಲ. ಹಾಗಿದ್ದರೂ ಒಂದು ಮೂಲಗಳ ಪ್ರಕಾರ ಐಪಿಎಲ್ ನಲ್ಲಿ ಆಡಿ ದಣಿದಿದ್ದ ಭಾರತೀಯ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡುವ ಉದ್ದೇಶದಿಂದ ಈ ರೀತಿ ತಡವಾಗಿ ಪಂದ್ಯ ಆಯೋಜಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಅಂತೂ ಇಂತೂ ಕಾದು ಕಾದು ಸುಸ್ತಾದ ಅಭಿಮಾನಿಗಳಿಗೆ ಇಂದು ಮೊದಲ ಪಂದ್ಯ ನೋಡುವ ಭಾಗ್ಯ ಸಿಗಲಿದೆ. ಪಂದ್ಯ ಮಧ್ಯಾಹ್ನ 3.00 ಕ್ಕೆ ಆರಂಭವಾಗಲಿದೆ.