Photo Courtesy: Twitterಮುಂಬೈ: ಏಷ್ಯಾ ಕಪ್ 2023 ಗೆ ನಿನ್ನೆ ಟೀಂ ಇಂಡಿಯಾ 17 ಸದಸ್ಯರ ಪಟ್ಟಿ ಪ್ರಕಟವಾಗಿದೆ. ಈ ಆಟಗಾರರ ಜೊತೆ ಮೀಸಲು ಆಟಗಾರನಾಗಿ ಸಂಜು ಸ್ಯಾಮ್ಸನ್ ಕೂಡಾ ಆಯ್ಕೆಯಾಗಿದ್ದಾರೆ. ಇದಕ್ಕೆ ಕಾರಣವೂ ಇದೆ.ಸಂಜು ಸ್ಯಾಮ್ಸನ್ ರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲು ಕಾರಣ ಕೆಎಲ್ ರಾಹುಲ್! ಎನ್ ಸಿನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಹುಲ್ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಏಷ್ಯಾ ಕಪ್ ಮೊದಲ ಪಂದ್ಯಕ್ಕಂತೂ ಅವರು ಲಭ್ಯರಿರುವುದಿಲ್ಲ.