ವೆಲ್ಲಿಂಗ್ಟನ್: ಟೀಂ ಇಂಡಿಯಾಕ್ಕೆ ನ್ಯೂಜಿಲೆಂಡ್ ಪ್ರವಾಸ ಯಾವತ್ತೂ ಸುಲಭವಲ್ಲ. 2003 ರ ನ್ಯೂಜಿಲೆಂಡ್ ಸರಣಿಯನ್ನು ಮತ್ತೆ ನೆನಪಿಸುತ್ತಿದೆ ಈ ಪ್ರವಾಸ ಕೂಡಾ.ಅಂದು ಗಂಗೂಲಿ ನೇತೃತ್ವದ ಟೀಂ ಇಂಡಿಯಾದಲ್ಲಿ ಘಟಾನುಘಟಿಗಳಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ನ್ಯೂಜಿಲೆಂಡ್ ನ ವೇಗದ ಪಿಚ್ ನಲ್ಲಿ ಸಂಪೂರ್ಣ ತಡವರಿಸಿದ್ದ ಭಾರತ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿತ್ತು. ಆದರೆ ಇಂದಿಗೂ ಕಿವೀಸ್ ಪ್ರವಾಸದಲ್ಲಿ ಭಾರತ ಹೇಗೆ ಆಡಬೇಕೆಂದು ಪಾಠ ಕಲಿತಿಲ್ಲ.ಇಂದಿನ ಟೀಂ ಇಂಡಿಯಾವಂತೂ ನ್ಯೂಜಿಲೆಂಡ್ ಪ್ರವಾಸವನ್ನು ಗಂಭೀರವಾಗಿ ಪರಿಗಣಿಸಿದಂತೆಯೇ