ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸತತ ಸೋಲುಂಡಿರುವ ಟೀಂ ಇಂಡಿಯಾಗೆ ಪ್ರಮುಖವಾಗಿ ಕಾಡುತ್ತಿರುವುದು ಬೌಲರ್ ಗಳ ಫಾರ್ಮ್ ಸಮಸ್ಯೆ. ಎರಡೂ ಪಂದ್ಯಗಳಲ್ಲಿ ಎದುರಾಳಿಗಳು ಬೃಹತ್ ಮೊತ್ತ ಪೇರಿಸಿದ್ದು, ಬಳಿಕ ಬ್ಯಾಟ್ಸ್ ಮನ್ ಗಳು ಶಕ್ತಿಮೀರಿ ಪ್ರಯತ್ನಿಸಿದರೂ ಆ ದೊಡ್ಡ ಮೊತ್ತವನ್ನು ದಾಟಲಾಗದೇ ಸೋಲನುಭವಿಸಿದ್ದಾರೆ. ಸಾಮಾನ್ಯವಾಗಿ ಭಾರತಕ್ಕೆ ಏಕದಿನ ಪಂದ್ಯಗಳಲ್ಲಿ ಮಧ್ಯಮ ಓವರ್ ಗಳಲ್ಲಿ ಸ್ಪಿನ್ನರ್ ಗಳೇ ಶಕ್ತಿ. ಒಂದು ವೇಳೆ ವೇಗಿಗಳು ರನ್ ನಿಯಂತ್ರಿಸಲು, ವಿಕೆಟ್ ಕೀಳಲು ವಿಫಲರಾದರೆ ಮಧ್ಯಮ ಓವರ್