Widgets Magazine

ತಾನು ನಾಯಕನಾದರೂ ಕೊಹ್ಲಿ ಯಾಕೆ ಧೋನಿಯನ್ನೇ ಫೀಲ್ಡಿಂಗ್ ಸೆಟ್ ಮಾಡಲು ಹೇಳುತ್ತಾರೆ ಗೊತ್ತಾ?

ಲಂಡನ್| Krishnaveni K| Last Modified ಭಾನುವಾರ, 26 ಮೇ 2019 (09:03 IST)
ಲಂಡನ್: ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿಯೇ ಆದರೂ ಕಠಿಣ ಪರಿಸ್ಥಿತಿಗಳಲ್ಲಿ ತಂಡದ ಸಂಪೂರ್ಣ ಜವಾಬ್ಧಾರಿ ಧೋನಿ ಹೆಗಲಿಗೇರುತ್ತದೆ. ಆ ಮೂಲಕ ಧೋನಿ ಇನ್ನೂ ಕ್ಯಾಪ್ಟನ್ ಆಗಿಯೇ ಉಳಿದಿದ್ದಾರೆ.

 
ಕೊಹ್ಲಿ ಯಾಕೆ ಫೀಲ್ಡಿಂಗ್ ಮಾಡುವಾಗ ಹೆಚ್ಚಿನ ನಿರ್ಧಾರಗಳಿಗೆ ಧೋನಿ ಮೇಲೆ ಅವಲಂಬಿತರಾಗಿದ್ದಾರೆ? ಈ ಪ್ರಶ್ನೆಗೆ ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಉತ್ತರಿಸಿದ್ದಾರೆ.
 
‘ಕೊಹ್ಲಿ ಬ್ಯಾಟ್ಸ್ ಮನ್ ಆಗಿ ಎಂತಹದ್ದೇ ಎಸೆತವನ್ನೂ ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸಬಲ್ಲರು. ಆದರೆ ಫೀಲ್ಡಿಂಗ್ ವಿಚಾರಕ್ಕೆ ಬಂದರೆ, ಬೌಲಿಂಗ್ ಬದಲಾವಣೆ ಮಾಡಬೇಕಾದರೆ ನಿರ್ಧಾರ ಕೈಗೊಳ್ಳಲು ಅವರು ಸೋಲುತ್ತಾರೆ. ಅವರಿಗೆ ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಗೊಂದಲವಾಗುತ್ತದೆ. ಇದಕ್ಕೇ ಅವರು ಧೋನಿಗೇ ಈ ಜವಾಬ್ಧಾರಿ ವಹಿಸುತ್ತಾರೆ. ನಾಯಕನಾಗಿ ಕೊಹ್ಲಿ ಇನ್ನೂ ಕಲಿಯುತ್ತಿದ್ದಾರಷ್ಟೆ’ ಎಂದು ರಾಜ್ ಕುಮಾರ್ ಶರ್ಮಾ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :