ಡುಬ್ಲಿನ್: ಐರ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಮೇಲೆ ಪತ್ರಿಕಾಗೋಷ್ಠಿಗೆ ಬರುವಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಖದಲ್ಲಿ ಖುಷಿಯ ಬದಲು ಚಿಂತೆಯೇ ಜಾಸ್ತಿಯಿತ್ತು.ಅವರ ಚಿಂತೆಗೆ ಕಾರಣ ತಂಡದ ಆಯ್ಕೆ ಪ್ರಕ್ರಿಯೆ. ಐರ್ಲೆಂಡ್ ವಿರುದ್ಧ ಎರಡೂ ಪಂದ್ಯಗಳಲ್ಲಿ ಬೇರೆ ಬೇರೆ ಆಟಗಾರರನ್ನು ಆಡಿಸಿ ಯಶಸ್ವಿಯಾದ ಬಳಿಕ ಕೊಹ್ಲಿಗೆ ಈಗ ಯಾರನ್ನು ಆಯ್ಕೆ ಮಾಡುವುದು, ಯಾರನ್ನು ಬಿಡುವುದು ಎಂಬ ತಲೆನೋವು ಶುರುವಾಗಿದೆಯಂತೆ.ಇದನ್ನೇ ಅವರು ಪತ್ರಕರ್ತರ ಎದುರು ಹಂಚಿಕೊಂಡಿದ್ದಾರೆ. ಎಲ್ಲರೂ ಬ್ಯಾಟ್