ಕೊಲೊಂಬೊ: ಟೀಂ ಇಂಡಿಯಾ ವಿರುದ್ಧ ಆಡುವುದೆಂದರೆ ಇತ್ತೀಚೆಗಿನ ದಿನಗಳಲ್ಲಿ ಪ್ರಬಲ ತಂಡಗಳೇ ಹಿಂದೆ ಮುಂದೆ ನೋಡುತ್ತಿದೆ. ಅಂತಹದ್ದರಲ್ಲಿ ಪ್ರಮುಖ, ಪ್ರತಿಭಾವಂತರ ಕೊರತೆ ಅನುಭವಿಸುತ್ತಿರುವ ಶ್ರೀಲಂಕಾ ಯಾವ ಲೆಕ್ಕ? ಹಾಗಂತ ನಾವು ಅಂದುಕೊಂಡರೆ ತಪ್ಪಾಗುತ್ತದೆ. ಉದಾಹರಣೆಗೆ ವೆಸ್ಟ್ ಇಂಡೀಸ್ ತಂಡವನ್ನೇ ನೋಡಿ. ಆ ತಂಡ, ಸುದೀರ್ಘ ಮಾದರಿಯಲ್ಲಿ ಇತ್ತೀಚೆಗೆ ಭೂಪಟದಲ್ಲೇ ಇಲ್ಲವೇನೋ ಎಂಬಷ್ಟು ಧೂಳೀಪಟವಾಗಿದೆ. ಹಾಗಿದ್ದರೂ, ಕಿರು ಮಾದರಿಯ ಕ್ರಿಕೆಟ್ ನಲ್ಲಿ ಪ್ರಭಾವ ಉಳಿಸಿಕೊಂಡಿದೆ.ಅದು ಸೀಮಿತ ಓವರ್ ಗಳ ಪಂದ್ಯದ ಶಕ್ತಿ.