ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಏಕದಿನ ಸರಣಿ ಹಿರಿಯ ಕ್ರಿಕೆಟಿಗ ಧೋನಿ ಪಾಲಿಗೆ ಮಹತ್ವದ್ದಾಗಲಿದೆ.ಈಗಾಗಲೇ ಫಾರ್ಮ್ ಕಳೆದುಕೊಂಡರೂ ದೇಶೀಯ ಕ್ರಿಕೆಟ್ ನಲ್ಲಿ ಆಡಲು ಒಪ್ಪದ ಕಾರಣಕ್ಕೆ ಬಿಸಿಸಿಐ ಆಯ್ಕೆಗಾರರ ಕೆಂಗಣ್ಣಿಗೆ ಗುರಿಯಾಗಿರುವ ಧೋನಿ ವಿಶ್ವಕಪ್ ದೃಷ್ಟಿಯಿಂದ ಈ ಸರಣಿಯಲ್ಲಿ ರನ್ ಗಳಿಸಲೇಬೇಕಿದೆ.ಇದುವರೆಗೆ ವಿಕೆಟ್ ಕೀಪಿಂಗ್ ನಲ್ಲಿ ಧೋನಿಗೆ ಸರಿಸಾಟಿಯಾದ ಆಟಗಾರನಿಲ್ಲ ಎಂದು ಕೊರಗುತ್ತಿದ್ದ ಟೀಂ ಇಂಡಿಯಾ ರಿಷಬ್ ಪಂತ್ ರೂಪದಲ್ಲಿ ಯುವ ಆಟಗಾರ ಸಿಕ್ಕಿರುವುದು ಧೋನಿಗೆ