Widgets Magazine

ವಿಶ್ವಕಪ್ 2019: ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಸರ್ಜರಿ ಸಾಧ್ಯತೆ

ಲಂಡನ್| Krishnaveni K| Last Modified ಮಂಗಳವಾರ, 2 ಜುಲೈ 2019 (09:35 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಮೊನ್ನೆಯ ಸೋಲು ಮತ್ತು ಕಳೆದೆರಡು ಪಂದ್ಯಗಳಿಂದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡುತ್ತಿರುವ ಬೆನ್ನಲ್ಲೇ ಇಂದು ಭಾರತ ಬಾಂಗ್ಲಾದೇಶವನ್ನು ಎದುರಿಸುತ್ತಿದೆ.

 
ಇಂದಿನ ಪಂದ್ಯ ಗೆದ್ದರೆ ಭಾರತಕ್ಕೆ ಸೆಮಿಫೈನಲ್ ಸ್ಥಾನ ಗ್ಯಾರಂಟಿಯಾಗಲಿದೆ. ಆದರೆ ಇದಕ್ಕೂ ಮೊದಲು ಭಾರತ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆಯಿದೆ.
 
ಆಲ್ ರೌಂಡರ್ ವಿಜಯ್ ಶಂಕರ್ ಗಾಯದ ಕಾರಣದಿಂದ ಹೊರಬಿದ್ದಿರುವುದರಿಂದ ಅನುಭವಿ ದಿನೇಶ್ ಕಾರ್ತಿಕ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಕೆಎಲ್ ರಾಹುಲ್ ಕೂಡಾ ಆರಂಭಿಕರಾಗಿ ದೊಡ್ಡ ಇನಿಂಗ್ಸ್ ಆಡದೇ ಇರುವ ಕಾರಣ ಅವರ ಸ್ಥಾನದಲ್ಲೂ ಬದಲಾವಣೆ ಆದರೆ ಅಚ್ಚರಿಯಿಲ್ಲ. ರಿಷಬ್ ಪಂತ್ ಅಥವಾ ದಿನೇಶ್ ಕಾರ್ತಿಕ್ ಗೆ ಆರಂಭಿಕರ ಸ್ಥಾನ ಸಿಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
 
ಇನ್ನು ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಫಿಟ್ ಆಗುತ್ತಿದ್ದು, ಕಳೆದ ಪಂದ್ಯದಲ್ಲಿ ದಯನೀಯ ವೈಫಲ್ಯ ಕಂಡ ಕುಲದೀಪ್ ಯಾದವ್ ಸ್ಥಾನದಲ್ಲಿ ಆಡಲಿಳಿಯುವ ಸಾಧ್ಯೆತೆಯಿದೆ. ಅತ್ತ ಬಾಂಗ್ಲಾ ಕೂಡಾ ಈ ಕೂಟದಲ್ಲಿ ಅತ್ಯುತ್ತಮ ಆಟವಾಡಿರುವುದರಿಂದ ಭಾರತ ಈ ಪಂದ್ಯವನ್ನು ಹಗುರವಾಗಿ ಕಾಣುವಂತೆಯೇ ಇಲ್ಲ.
ಇದರಲ್ಲಿ ಇನ್ನಷ್ಟು ಓದಿ :