ಲಂಡನ್: ವಿಶ್ವಕಪ್ 2019 ರಲ್ಲಿ ಚಾಂಪಿಯನ್ ಆಗುವ ಕನಸು ಹೊತ್ತು ಟೂರ್ನಮೆಂಟ್ ಆರಂಭಿಸಿದ್ದ ಭಾರತ ಸೆಮಿಫೈನಲ್ ನಲ್ಲೇ ಹೊರಬಿದ್ದು ಆಘಾತ ಅನುಭವಿಸಿದೆ.ಕೇವಲ 240 ರನ್ ಗಳ ಗುರಿ ಬೆನ್ನತ್ತಲಾಗದೇ ಆರಂಭದ 40 ನಿಮಿಷ ಕೆಟ್ಟದಾಗಿ ಆಡಿ ಟೀಂ ಇಂಡಿಯಾ ಪಂದ್ಯ ಕಳೆದುಕೊಂಡು ತನ್ನನ್ನು ತಾನೇ ಹಳಿದುಕೊಳ್ಳುವಂತಾಗಿದೆ. ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜುಜುಬಿ ಮೊತ್ತಕ್ಕೆ ಪೆವಿಲಿಯನ್ ಪೆರೇಡ್ ನಡೆಸಿದ್ದು ಭಾರತಕ್ಕೆ ಕಂಟಕವಾಯಿತು. ಇದರ ಬೆನ್ನಲ್ಲೇ ತಮ್ಮ ಅನುಭವವನ್ನು ಧಾರೆಯೆರೆದು